ಮಹಿಳೆಯ ಜನನಾಂಗ ಹರಣ (ಫೀಮೇಲ್ ಜೆನಿಟಲ್ ಮ್ಯುಟಿಲೇಷನ್, ) ಎಂದರೆ ಮಹಿಳೆಯ ಜನನಾಂಗ ಹರಣ ಮತ್ತು ಜನನಾಂಗ ಕತ್ತರಿಸುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು () "ವೈದ್ಯಕೀಯವಲ್ಲದ ಕಾರಣಗಳಿಂದಾಗಿ ಮಹಿಳೆಯ ಬಾಹ್ಯ ಜನನಾಂಗದ ಭಾಗಶಃ ಅಥವಾ ಪೂರ್ಣವಾದ ಹರಣ ಅಥವಾ ಮಹಿಳೆಯ ಜನನಾಂಗಕ್ಕೆ ಉಂಟಾಗುವ ಬೇರೆ ಹಾನಿ" ಎಂದು ವ್ಯಾಖ್ಯಾನಿಸಿದೆ." ಮಹಿಳೆಯ ಜನನಾಂಗ ಹರಣವನ್ನು ಆಫ್ರಿಕದಲ್ಲಿನ ಬುಡಕಟ್ಟು ಸಬ್-ಸಹರನ್ ಆಫ್ರಿಕಾದಲ್ಲಿಹಾಗೂ ಈಶಾನ್ಯ ಆಫ್ರಿಕಾದಲ್ಲಿ,ಕಡಿಮೆ ಪ್ರಮಾಣದಲ್ಲಿ ಏಷ್ಯಾದಲ್ಲಿ,ಮಧ್ಯಪ್ರಾಚ್ಯದಲ್ಲಿ ಹಾಗೂ ಬೇರೆಡೆ ಇರುವ ವಲಸೆ ಸಮುದಾಯಗಳಲ್ಲಿ ನಡೆಸಲಾಗುತ್ತದೆ. ಇದನ್ನು ನಡೆಸುವ ವಯಸ್ಸು ಜನನ ಸಂದರ್ಭದಿಂದ ಪ್ರಾರಂಭಿಸಿ ಪ್ರಾಯಪ್ರಬುದ್ಧವಾಗುವವರೆಗೂ ಇರಬಹುದು; ಅರ್ಧದಷ್ಟು ದೇಶಗಳಲ್ಲಿ ಇದಕ್ಕಾಗಿ ರಾಷ್ಟ್ರೀಯ ಅಂಕಿ ಅಂಶಗಳು ಲಭ್ಯವಿವೆ, ಹೆಚ್ಚಿನ ಬಾಲಕಿಯರು ಐದು ವರ್ಷ ವಯಸ್ಸಿಗೂ ಮುನ್ನ ಇದಕ್ಕೆ ತುತ್ತಾಗುತ್ತಾರೆ. ಪ್ರಕ್ರಿಯೆಯು ಒಂದು ಅಥವಾ ಹಲವಾರು ಪ್ರಕ್ರಿಯೆಗಳನ್ನು ಒಳಗೊಳ್ಳುವುದು, ಪ್ರಕ್ರಿಯೆಗಳು ಬುಡಕಟ್ಟಿನ ಆಧಾರದ ಮೇಲೆ ಭಿನ್ನವಾಗಿರುತ್ತವೆ. ಇವುಗಳಲ್ಲಿ ಭಗಾಂಕುರ ಮತ್ತು ಭಗಾಂಕುರದ ಮೇಲಿನ ತ್ವಚೆ (ಕ್ಲಿಟೋರಲ್ ಹುಡ್); ಭಗಾಂಕುರದ ಕೆಲ ಅಥವಾ ಎಲ್ಲ ಭಾಗ ಹಾಗೂ ಒಳಯೋನಿ (ಇನರ್ ಲ್ಯಾಬಿಯಾ); ಹಾಗೂ ತೀವ್ರವಾದ ರೂಪದ ಕತ್ತರಿಸುವಿಕೆ ಎಂದರೆ (ಇನ್‌ಫೈಬ್ಯುಲೇಷನ್) ಯೋನಿಯ ಹೊರತುಟಿಯ ಅಥವಾ ಹೊರಯೋನಿಯ ಅಥವಾ ಯೋನಿಯ ಮುಚ್ಚುವಿಕೆಯ ಭಾಗದ ಭಾಗಶಃ ಪೂರ್ಣ ಕತ್ತರಿಸುವಿಕೆ. ಈ ಪ್ರಕ್ರಿಯೆಯಲ್ಲಿ, ಮೂತ್ರದ ಹರಿವಿಗೆಹಾಗೂ ಋತುಚಕ್ರದ ರಕ್ತಪ್ರವಾಹಕ್ಕೆ ಸಣ್ಣ ರಂಧ್ರವನ್ನು ಇರಿಸಲಾಗುವುದು ಹಾಗೂ ಯೋನಿಯನ್ನು ಲೈಂಗಿಕಕ್ರಿಯೆ ಮತ್ತು ಶಿಶುಜನನಕ್ಕಾಗಿ ತೆರೆಯಲಾಗುವುದು. ಆರೋಗ್ಯ ಪರಿಣಾಮಗಳು ಪ್ರಕ್ರಿಯೆಯನ್ನು ಸಂದರ್ಭದ ಅನುಸಾರ ಅವಲಂಬಿಸುತ್ತವಾದರೂ ಸೋಂಕುಗಳು, ತೀವ್ರವಾದ ನೋವು, ಛೇದಗಳು, ಗರ್ಭಧಾರಣೆ ಶಕ್ತಿ ನಷ್ಟ, ಶಿಶುಜನನದ ಸಂದರ್ಭದಲ್ಲಿ ವಿಷಮತೆಗಳು ಹಾಗೂ ಮಾರಕ ರಕ್ತಸ್ರಾವ ಒಳಗೊಳ್ಳುವವು. ಅಭ್ಯಾಸವು ಲಿಂಗ ತಾರತಮ್ಯ, ಮಹಿಳೆಯ ಲೈಂಗಿಕತೆಯ ಮೇಲೆ ನಿಯಂತ್ರಣದ ಪ್ರಯತ್ನಗಳು, ಪಾವಿತ್ರ್ಯದ, ಕನ್ಯತ್ವದ ಹಾಗೂ ಸೌಂದರ್ಯದ ಆಲೋಚನೆಗಳಲ್ಲಿ ನೆಲೆಗೊಂಡಿದೆ. ಇದನ್ನು ಸಾಮಾನ್ಯವಾಗಿ ಪ್ರಾರಂಭಿಸುವವರು ಹಾಗೂ ನಡೆಸುವವರು ಮಹಿಳೆಯರೇ, ಅವರು ಇದನ್ನು ಗೌರವದ ತಳಹದಿ ಎಂದು ನೋಡುತ್ತಾರೆ, ಹಾಗೂ ಇವರು ತಮ್ಮ ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳಿಗೆ ಯೋನಿಛೇದ ಮಾಡದಿರುವುದು ಅವರು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವಂತೆ ಮಾಡುವುದು ಎಂದು ಭಾವಿಸುತ್ತಾರೆ. 29 ದೇಶಗಳಲ್ಲಿನ 130 ಮಿಲಿಯನ್ನಿಗೂ ಹೆಚ್ಚು ಮಹಿಳೆಯರು ಮತ್ತು ಬಾಲಕಿಯರು ಗೆ ಒಳಗಾಗಿದ್ದಾರೆ. ಇವರಲ್ಲಿ ಎಂಟು ಮಿಲಿಯನ್ನಿಗೂ ಹೆಚ್ಚು ಜನ ತೀವ್ರ ರೂಪದ ಕತ್ತರಿಸುವಿಕೆಗೆ ಒಳಗಾಗಿದ್ದಾರೆ, ಈ ಅಭ್ಯಾಸವು ಸಾಮಾನ್ಯವಾಗಿ ಡಿಜಿಬೌಟಿ, ಎರಿಟ್ರಿಯಾ, ಸೊಮಾಲಿಯಾ ಹಾಗೂ ಸೂಡಾನುಗಳಲ್ಲಿದೆ. ಯೋನಿಛೇದವು ಅದು ನಡೆಯುವ ಹೆಚ್ಚಿನ ದೇಶಗಳಲ್ಲಿ ಕಾನೂನುಬಾಹಿರವಾಗಿದೆ ಅಥವಾ ನಿರ್ಬಂಧಿತಗೊಂಡಿದೆ. ಆದರೆ ಕಾನೂನುಜಾರಿಯು ಕಳಪೆಯಾಗಿದೆ. ಯೋನಿಛೇದವನ್ನು ಬಹಿಷ್ಕರಿಸುವುದಕ್ಕಾಗಿ 1970ರಿಂದಲೂ ಅಂತಾರಾಷ್ಟ್ರೀಯ ಪ್ರಯತ್ನಗಳು ನಡೆಯುತ್ತ ಬಂದಿವೆ, ಹಾಗೂ 2012 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು, ಯೋನಿಛೇದವನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಗುರುತಿಸಿದೆ. ಇದಕ್ಕೆ ವಿರೋಧಗಳೂ ಇಲ್ಲದಿಲ್ಲ, ನಿರ್ದಿಷ್ಟವಾಗಿ ಆಂತ್ರೊಪಾಲಜಿಸ್ಟರಿಂದ. ಎರಿಕ್ ಸಿಲ್ವರ್‌ಮ್ಯಾನ್ ಹೇಳುವ ಪ್ರಕಾರ ಯೋನಿಚೇದವು ಆಂತ್ರೊಪಾಲಜಿಯ ಕೇಂದ್ರೀಯ ನೈತಿಕ ವಿಚಾರಗಳಲ್ಲಿ ಒಂದಾಗಿದೆ, ಇದು ಸಾಂಸ್ಕೃತಿಯ ಸಾಪೇಕ್ಷತಾವಾದ, ಸಹ್ಯತೆ ಹಾಗೂ ಮಾನವ ಹಕ್ಕುಗಳ ವಿಶ್ವವ್ಯಾಪಿತ್ವದ ಬಗ್ಗೆ ಕಠಿಣವಾದ ಪ್ರಶ್ನೆಗಳನ್ನು ಎತ್ತುತ್ತಿದೆ. == ನೋಡಿ == ಯೋನಿ ಸಂಭೋಗ == ಪೂರಕ ಮಾಹಿತಿ == ಮಹಿಳೆಯರ ಹಸ್ತಮೈಥುನ;ವಿನೋದ ಛಬ್ಬಿ : 23 ಏಪ್ರಿಲ್ 2019, ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕದಂತೆ ಕಳೆದ ಹತ್ತು ವರ್ಷಗಳಲ್ಲಿ 3-4 ಕೋಟಿ ಹೆಂಗಸರ ಭಗಾಂಕುರವನ್ನು ಕಿತ್ತುಹಾಕಿ ಗಂಡಸರ ಸುಖದ ಗುಲಾಮರನ್ನಾಗಿ ಮಾಡಲಾಗಿದೆ. == ಉಲ್ಲೇಖಗಳು ==